ರಸಪ್ರಶ್ನೆಗಳು:-ಮಕ್ಕಳಲ್ಲೇ ೫ ಗುಂಪುಗಳನ್ನು ರಚಿಸಿ ಪ್ರತಿ ಗುಂಪಿಗೂಒಂದೊಂದು ಖಂಡಗಳ ಹೆಸರುಗಳನ್ನು ಇಟ್ಟು ೫ ಸುತ್ತು ಪ್ರಶ್ನೆಗಳನ್ನು ಕೇಳಲಾಗುವುದು.
1 .ಒಟ್ಟು ಖಂಡಗಳು ಎಷ್ಟು? ____07. 2. ದೊಡ್ಡ ಖಂಡ ಯಾವುದು? ---ಏಷ್ಯಾ ಖಂಡ. 3.ಉತ್ತರ ಅಮೆರಿಕ ಖಂಡ ಎಷ್ಟನೇ ದೊಡ್ಡ. ಭೂಖಂಡವಾಗಿದೆ? ---3ನೇ 4.ಉತ್ತರ ಅಮೆರಿಕದ ದೊಡ್ಡ ದ್ವೀಪ ಯಾವುದು? -----ಗೀನ್ ಲ್ಯಾಂಡ್. 5.ಉ .ಅಮೆರಿಕದಲ್ಲಿರುವ ಒಟ್ಟು ರಾಜ್ಯಗಳೆಷ್ಟು? --24. 6.ಮಹಾಕಂದರವನ್ನು ನಿರ್ಮಾಣ ಮಾಡಿದ ನದಿ ಯಾವುದು? -------ಕೊಲೊರಾಡೋ ನದಿ. 7."ಪ್ರಪಂಚದ ಪ್ರಾಕೃತಿಕ ಅದ್ಭುತ " ಎಂದು ಯಾವುದನ್ನು ಕರೆಯುತ್ತಾರೆ? ---ಮಹಾಕಂದರ. 8.ವಿಶ್ವದ ಅತಿ ದೊಡ್ಡ ಸಿಹಿನೀರಿನ ಸರೋವರ ಯಾವುದು? --------ಸುಪೀರಿಯರ್ . 9.ಉ.ಅಮೆರಿಕದಲ್ಲಿ 'ಲಂಬರ್ ಜಾಕ್ಸ' ಎಂದು ಯಾರನ್ನು ಕರೆಯುತ್ತಾರೆ? -------ಮರ ಕಡಿಯುವ ವೃತ್ತಿಯನ್ನು ಅವಲಂಬಿಸಿರುವ ಜನರನ್ನು. 10."ರೊಟ್ಟಿಯ ಬುಟ್ಟಿ "ಎಂದು ಯಾವುದನ್ನು ಕರೆಯುತ್ತಾರೆ? -----ಪ್ರೃರೀಸ್. 11.ಬೆಳೆ ಪಟ್ಟಿ ಎಂದರೇನು? 12.ಉ.ಅಮೆರಿಕದ ಪ್ರಮುಖ ಕಸುಬು ಯಾವುದು? ------ಕೃಷಿ. 13.'ಜಗತ್ತಿನ ಸಕ್ಕರೆಯ ಬೋಗುಣಿ'ಎಂದು ಯಾವುದನ್ನು ಕರೆಯುತ್ತಾರೆ? -----ಕ್ಯೂಬಾ. 14."ದ್ರಾಕ್ಷಾರಸದ ನಾಡು" ಎಂದು ಯಾವುದನ್ನು ಕರೆಯುತ್ತಾರೆ? -------ಕ್ಯಾಲಿಫೋರ್ನಿಯಾ. 15.ಉ.ಅಮೆರಿಕದ ಮೊದಲ ಗಣಿ ಯಾವುದು? ---------ಚಿನ್ನದ ಗಣಿ. 16.ಉ.ಅಮೆರಿಕದ ದೊಡ್ಡ ನದಿ ಯಾವುದು? ------ಮಿಸಿಸಿಪ್ಪಿ. 17.ಉ.ಅಮೆರಿಕಾ ಖಂಡವು ಯಾವ ಗೋಳಾರ್ಧದಲ್ಲಿ ಇದೆ? -----------ಉತ್ತರ ಗೋಳಾರ್ಧದಲ್ಲಿ. 18.'ಉಕ್ಕಿನ ನಗರ' ಎಂದು ಯಾವ ನಗರವನ್ನು ಕರೆಯುತ್ತಾರೆ? -----ಪಿಟ್ಸ್‌ಬರ್ಗ್. 19.ಉ.ಅಮೆರಿಕವನ್ನು ಆಯ್ದು ಹೋಗುವ ೨ ಪ್ರದಾನ ಅಕ್ಷಾಂಶಗಳು ಯಾವುವು? ---ಕರ್ಕಾಟಕ ಸಂಕ್ರಾಂತಿ ವೃತ್ತ&ಆರ್ಕ್ಟಿಕ್ ವೃತ್ತ. 20.ಉ.ಅಮೆರಿಕ ಮತ್ತು ಏಷ್ಯಾ ಖಂಡವನ್ನು ಬೇರ್ಪಡಿಸುವ ಜಲಸಂಧಿ ಯಾವುದು? -------ಬೇರಿಂಗ್ ಜಲಸಂಧಿ.